ದಿನಾಂಕ:19-12-2021 ರಂದು ಜರುಗಲಿರುವ ಸಂಘದ ಸರ್ವ ಸದಸ್ಯರ ಸಭೆಯಲ್ಲಿ 2020-21 ನೇ ಸಾಲಿನಲ್ಲಿ ಜಿಲ್ಲಾಮಟ್ಟ, ರಾಜ್ಯಮಟ್ಟ ಮತ್ತು ರಾಷ್ಟ್ರಮಟ್ಟದ ಪ್ರಶಸ್ತಿ ಪಡೆದ ಸದಸ್ಯರಿಗೆ ಅಭಿನಂದಿಸಲಾಗುವುದು, ಆದ್ದರಿಂದ ಪ್ರಶಸ್ತಿ ಪುರಸ್ಕೃತ ಸದಸ್ಯರು ತಮ್ಮ ಪ್ರಶಸ್ತಿ ದಾಖಲೆಗಳೊಂದಿಗೆ ತಮ್ಮ ವೈಯಕ್ತಿಕ ವಿವರಗಳನ್ನು ಲಿಖಿತ ರೂಪದಲ್ಲಿ ದಿನಾಂಕ:10-11-2021 ರೊಳಗೆ ಸಂಘದ ಕಛೇರಿಗೆ ತಲುಪಿಸಲು ಕೋರಿದೆ.

ಇದೇ ಸಂದರ್ಭದಲ್ಲಿ 2020-21ನೇ ಸಾಲಿನಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನದ ಅಂತಿಮ ಪದವಿ ಪರೀಕ್ಷೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ಸದಸ್ಯರ ಮಕ್ಕಳಿಗೆ ಹಾಗೂ ಪಿ.ಹೆಚ್.ಡಿ ಪಡೆದ ಸದಸ್ಯರಿಗೆ ಪುರಸ್ಕರಿಸಲಾಗುವುದು. ಆದ್ದರಿಂದ ಮಾನ್ಯ ಸದಸ್ಯರು ದಿನಾಂಕ:10-11-2021 ರೊಳಗೆ ಮೇಲ್ಕಂಡ ವಿವರಗಳಿಗೆ ಸಂಬಂಧಿಸಿದಂತೆ ತಮ್ಮ ಅಂಕ ಪಟ್ಟಿಯೊಂದಿಗೆ ವಿವರಗಳನ್ನು ಕಛೇರಿಗೆ ತಲುಪಿಸಲು ಕೋರಿದೆ.

Leave a Reply

Your email address will not be published. Required fields are marked *