ಕುಟುಂಬ ಸುರಕ್ಷಾ ನಿಧಿ


ನಮ್ಮ ಸಂಘದಲ್ಲಿ ಸದಸ್ಯರುಗಳಿಗೆ ಕುಟುಂಬ ಸುರಕ್ಷಾ ನಿಧಿ ಯೋಜನೆ ಜಾರಿಯಲ್ಲಿದ್ದು, ಈ ಯೋಜನೆಯಿಂದ
ಅವರ ಕುಟುಂಬದವರಿಗೆ ನೀಡುವ ಆರ್ಥಿಕ ಸೌಲಭ್ಯ ಮತ್ತು ವಿವರ ಈ ಕೆಳಗಿನಂತಿರುತ್ತದೆ.


ಉದ್ದೇಶ:  ಈ ಯೋಜನೆಯ ಸದಸ್ಯರು ಮರಣ ಹೊಂದಿದರೆ ಅವರ ಕುಟುಂಬಕ್ಕೆ ಆರ್ಥಿಕ ನೆರವು ನೀಡುವುದರ  ಮುಖಾಂತರ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ನೀಡುವುದು ಕುಟುಂಬ ಸುರಕ್ಷಾ ನಿಧಿಯ ಪ್ರಮುಖ ಉದ್ದೇಶ.


ಅರ್ಹತೆ: ಸಂಘದ ಎಲ್ಲಾ ಸದಸ್ಯರು ಈ ಯೋಜನೆಯ ಸದಸ್ಯತ್ವ ಪಡೆಯಬಹುದು.


ಸದಸ್ಯತ್ವ: ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಯೊಂದಿಗೆ ರೂ. ೧೦೦೦.೦೦ ಮೊಬಲಗನ್ನು  ಠೇವಣಿಸಿ ಸದಸ್ಯತ್ವ ಪಡೆಯುವುದು.


ನಿಧಿಯ ಕೊಡುಗೆ : ಸದಸ್ಯರ ಮರಣೋತ್ತರ ವಯಸ್ಸಿನ ಆಧಾರದ ಮೇಲೆ ಈ ಕೆಳಗೆ ಕಾಣಿಸಿದಂತೆ ನಿಧಿಯ  ಮೊಬಲಗನ್ನು ನಿಗದಿಪಡಿಸಲಾಗಿದೆ.

35 ವರ್ಷಗಳವರೆಗೆ                                         ರೂ.2೦,೦೦೦-೦೦

36 ವರ್ಷಗಳಿಂದ 45 ವರ್ಷಗಳವರೆಗೆ                 ರೂ. 3೦,೦೦೦-೦೦

46 ವರ್ಷಗಳಿಂದ 55 ವರ್ಷಗಳವರೆಗೆ                 ರೂ. 25,೦೦೦-೦೦

56 ವರ್ಷಗಳಿಂದ 70 ವರ್ಷಗಳವರೆಗೆ                 ರೂ. 15,೦೦೦-೦೦

70 ವರ್ಷಗಳ ಮೇಲ್ಪಟ್ಟು                                  ರೂ.  1೦,೦೦೦-೦೦

( ಈ ಮೇಲ್ಕಂಡ ಮೊಬಲಗಿನಲ್ಲಿ ಯೋಜನೆಯ ಸದಸ್ಯತ್ವದ ಹಣವು ಸೇರಿರುತ್ತದೆ.)
ಸದಸ್ಯತ್ವ ಕೊನೆಗೊಳ್ಳುವಿಕೆ : ಯೋಜನೆಯ ಸದಸ್ಯರು ಸಂಘದ ಸದಸ್ಯತ್ವವು ಹಿಂತೆಗೆಯಲ್ಪಟ್ಟಾಗ ಅಥವಾ ರದ್ಧತಿಯಾದಾಗ  ಯೋಜನೆಯ ಸದಸ್ಯತ್ವ ಕೊನೆಗೊಳ್ಳುತ್ತದೆ.

ಠೇವಣಿಯ ವಾಪಾಸಾತಿ : ಮೇಲ್ಕಂಡ ಸಂದರ್ಭಗಳಿಗನುಸಾರವಾಗಿ ಸದಸ್ಯತ್ವದ ಮೊಬಲಗಿಗೆ ಸಂಘದ ಉಳಿತಾಯ ಖಾತೆಗೆ ಕಾಲಕಾಲಕ್ಕೆ ನೀಡುವ ಬಡ್ಡಿದರದ ಮೇಲೆ ಸರಳ ಬಡ್ಡಿ ಸೇರಿಸಿ ಹಿಂತಿರುಗಿಸಲಾಗುವುದು. ಯೋಜನೆಯ ಸದಸ್ಯತ್ವ ಕೊನೆಗೊಳ್ಳುತ್ತದೆ.

ಲಾಕರ್ ಸೇವೆ:


ಸಂಘದ ಸದಸ್ಯರ ಅನುಕೂಲಕ್ಕಾಗಿ ಸೇಫ್ ಡಿಪಾಸಿಟ್ ಲಾಕರ್‌ಗಳ ಸೌಲಭ್ಯವನ್ನು ಪ್ರಾರಂಭಿಸಲಾಗಿದೆ. ಮಾನ್ಯ ಸದಸ್ಯರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಲು ಕೋರಿದೆ.

ಎಸ್.ಎಂ.ಎಸ್. ಸೇವೆ :


ಸಂಘದ ಸದಸ್ಯರುಗಳು ಮತ್ತು ಸೊಸೈಟಿಯ ನಡುವಿನ ವ್ಯವಹಾರವು ಹೆಚ್ಚು ಪರಿಣಾಮಕಾರಿಯಾಗುವಂತೆ ನಿರ್ವಹಿಸಲು ಎಸ್.ಎಂ.ಎಸ್. ಸೇವೆಯನ್ನು ಪ್ರಾರಂಭಿಸಲಾಗಿದೆ. ಸಂಘದ ಪ್ರಮುಖ ಚಟುವಟಿಕೆಗಳ ಬಗ್ಗೆ ಮಾಹಿತಿ, ಶುಭ ಸಂದೇಶಗಳು, ಸಕಾಲದಲ್ಲಿ ತಮಗೆ ತಲುಪಿಸಲು ಅನುಕೂಲವಾಗುವಂತೆ ಪ್ರತಿಯೊಬ್ಬ ಸದಸ್ಯರು ತಮ್ಮ ಇತ್ತೀಚಿನ ಭಾವಚಿತ್ರ, ಮನೆಯ ವಿಳಾಸ, ಮೊಬೈಲ್ ಸಂಖ್ಯೆಗಳನ್ನು ಸಂಘದ ಕಛೇರಿಯಲ್ಲಿ ನೀಡಬೇಕಾಗಿ ಕೋರಲಾಗಿದೆ.